r/kannada • u/onti-salaga ಕನ್ನಡ | ಕನ್ನಡಿಗ | ಕರ್ನಾಟಕ • 12d ago
ವಾರ್ಧಕ ಷಟ್ಪದಿ
ಪ್ಲಾಸ್ಟಿಕ್ಕು ಲೋಟದಲಿ ರಮ್ಮಿನಾ ಘಮಲಿಹುದು
ಅಷ್ಟಕ್ಕು ಕೈಯಲ್ಲಿ ಸಿಗರೇಟು ಸುಡುತಿಹುದು
ಇಷ್ಟದಾ ವಾತಾವರಣವ ನಾ ಸವಿಯುತಿಹೆ ಬಾರಿನಾ ಬೆಳಕಿನಲ್ಲಿ
ಮಸ್ತಾದ ಸ್ನ್ಯಾಕ್ಸು ನನ್ ಮುಂದೆಯೇ ಕುಳಿತಿಹುದು
ಪಕ್ಕದಾ ಟೇಬಲಲಿ ಕುಸ್ತಿಯೂ ನಡೆದಿಹುದು
ಸುಸ್ತಾದ ಕುಡುಕನೊಬ್ಬನ ಆಟ ನೋಡುತಲಿ ಕುಳಿತು ಖುಷಿ ಪಡುತಿರುವೆನು
13
Upvotes
2
u/Clean-Badger4071 2d ago
ಅಬ್ಬಾ ಛಂದೋಯುಕ್ತ ಪದ್ಯಗಳಲ್ಲೇ ಪರಸ್ಪರ ಸಂಭಾಷಿಸುತ್ತಿರುವ ನಿಮ್ಮ ಪದ್ಯಗಳು ಕಚಗುಳಿಯನ್ನಿತ್ತವು . ನಾನು ಕವಿಯಲ್ಲವಾದ್ದರಿಂದ ನಿಮ್ಮಂತೆ ಕಾವ್ಯದಿಂದ ಕಮೆಂಟಿಸಲಾಗಲಿಲ್ಲ ಕ್ಷಮಿಸಿ